Kuruhina Shetty Gotras
ಕುರುಹಿನಶೆಟ್ಟಿ ಧರ್ಮದವರ ಗೋತ್ರಗಳ
ಪರಿಚಯ
ಲೋಕ ಕಂಟಕರಾದ ತಾರಕಾಸುರ ಮೊದಲಾದ 66 ಕೋಟಿ ದಾನವರು ಸಕಲ ಲೋಕಂಗಳಿಗೆ ದಾಳಿಯನ್ನಿಡಲು ಹರಿಬ್ರಹ್ಮರಿ ೦ ದೊಡಗುಡಿ ದೇವತೆಗಳೆಲ್ಲರೂ ಆದಿಶಕ್ತಿ ಪಾರ್ವತಾದೇವಿಯಲ್ಲಿ ಮೊರೆಯಿಟ್ಟ ಸಮಯದಲ್ಲಿ ಪಾರ್ವತಾದೇವಿಯು ಸಮಾಧಿಸ್ತನಾಗಿ ಕುಳಿತ ಪರಮೇಶ್ವರನನ್ನು ಎಚ್ಚರಗೊಳಿಸಲು ಆ ಪರಮೇಶ್ವರನು ಪಾರ್ವತಾದೇವಿಗೆ ಓಂಕಾರವೆಂಬ ರತಿಕಲೆಯನ್ನಿತ್ತುದರಿಂದ ಜಗದ್ವಾಪಿಯಾದ ಓಂಕಾರ ಪರಬ್ರಹ್ಮ ಮೂರ್ತಿಯೇ ತಾಕಾಸುರನ ವರಪ್ರಭಾವ ಶಕ್ತಿಗೆ ಮಿಗಿಲಾದ 66 ಜನ ರುದ್ರರಾಗಿ ಆವತರಿಸಿ ಬಂದು ವೃಷಭ ರೂಪದಿಂದ ದೈತ್ಯರನ್ನು ಸಂಹರಿಸಿದರು.
ಆ ದೈತ್ಯರನ್ನು ಸಂಹರಿಸುವ ಕಾಲಕ್ಕೆ 66 ದನುಜರಾಜನು ರುದ್ರರನ್ನು ಕುರಿತು ನಿಮ್ಮಿಂದ ನಮಗೆ ಮುಕ್ತಿ ದೊರೆಯುವದು ಅದಕ್ಕಾಗಿ ನಿಮ್ಮ ವಂಶಜರು ನಮ್ಮನ್ನು ಸದಾ ನೆನೆಯುತ್ತಿರುವ ಹಾಗೆ ಅನುಗ್ರಹಿಸಬೇಕು ’ ’ ಎಂದು ಬೇಡಿಕೊಂಡರು . ಅದರಂತೆ ರುದ್ರರು ಅನುಗ್ರಹಿಸಲಾಗಿ ಪಾರ್ವತಾದೇವಿಯು ರುದ್ರನ್ನು ಕೈಲಾಸಕ್ಕೆ ಕರೆದುಕೊಂಡು ಬಂದು ಆ ರುದ್ರರು ಯಾವ ಯಾವ ದನುಜರಾಜರ ಶಿರವಿಡಿದು ಕೊಂದಿದ್ದರೋ ಅವರವರ ಹೆಸರುಗಳೇ ತತ್ಪುತ್ರರಿಗೆ ಗೋತ್ರಗಳಾದವೆಂದು ಹೇಳಿದ ರೀತಿಯಲ್ಲಿ ಪಟ್ಟಗಟ್ಟಿದಳು ಹೇಗೆಂದರೆ.
ಶ್ರೀ ನೀಲಕಂಠ ರುದ್ರನು ಶುಭ ವರ್ಣದ ವೃಷಭ ರೂಪದಿಂದ ಪರಘಾಸುರನೆಂಬ ದೈತ್ಯನನ್ನು ಸಂಹರಿಸಿದುದಕ್ಕಾಗಿ ಪರಮ ಗೋತ್ರವೆಂದು ನಾಮ ಉಂಟಾಯಿತು . ಅದಕ್ಕದೇ ಕುರುಹು . ಇದೇ ಪ್ರಕಾರ 66 ರುದ್ರರು ಭಿನ್ನ ಭಿನ್ನ ವರ್ಣದ ವೃಷಭ ರೂಪದಿಂದ 66 ದನುಜರಾಜರನ್ನು ಅವರ ಸೈನ್ಯಬಲದೊಂದಿಗೆ ಸಂಹರಿಸಿದ ಕುರಹಿಗಾಗಿ 66 ಗೊತ್ರಗಳ ನಾಮಗಳು ಕೆಳಗಿನಂತೆ ಉದಯಿಸಿದವು.