Kuruhina Shetty Gotras

Page content

ಕುರುಹಿನಶೆಟ್ಟಿ ಧರ್ಮದವರ ಗೋತ್ರಗಳ

ಪರಿಚಯ

ಲೋಕ ಕಂಟಕರಾದ ತಾರಕಾಸುರ ಮೊದಲಾದ 66 ಕೋಟಿ ದಾನವರು ಸಕಲ ಲೋಕಂಗಳಿಗೆ ದಾಳಿಯನ್ನಿಡಲು ಹರಿಬ್ರಹ್ಮರಿ ೦ ದೊಡಗುಡಿ ದೇವತೆಗಳೆಲ್ಲರೂ ಆದಿಶಕ್ತಿ ಪಾರ್ವತಾದೇವಿಯಲ್ಲಿ ಮೊರೆಯಿಟ್ಟ ಸಮಯದಲ್ಲಿ ಪಾರ್ವತಾದೇವಿಯು ಸಮಾಧಿಸ್ತನಾಗಿ ಕುಳಿತ ಪರಮೇಶ್ವರನನ್ನು ಎಚ್ಚರಗೊಳಿಸಲು ಆ ಪರಮೇಶ್ವರನು ಪಾರ್ವತಾದೇವಿಗೆ ಓಂಕಾರವೆಂಬ ರತಿಕಲೆಯನ್ನಿತ್ತುದರಿಂದ ಜಗದ್ವಾಪಿಯಾದ ಓಂಕಾರ ಪರಬ್ರಹ್ಮ ಮೂರ್ತಿಯೇ ತಾಕಾಸುರನ ವರಪ್ರಭಾವ ಶಕ್ತಿಗೆ ಮಿಗಿಲಾದ 66 ಜನ ರುದ್ರರಾಗಿ ಆವತರಿಸಿ ಬಂದು ವೃಷಭ ರೂಪದಿಂದ ದೈತ್ಯರನ್ನು ಸಂಹರಿಸಿದರು.

ಆ ದೈತ್ಯರನ್ನು ಸಂಹರಿಸುವ ಕಾಲಕ್ಕೆ 66 ದನುಜರಾಜನು ರುದ್ರರನ್ನು ಕುರಿತು ನಿಮ್ಮಿಂದ ನಮಗೆ ಮುಕ್ತಿ ದೊರೆಯುವದು ಅದಕ್ಕಾಗಿ ನಿಮ್ಮ ವಂಶಜರು ನಮ್ಮನ್ನು ಸದಾ ನೆನೆಯುತ್ತಿರುವ ಹಾಗೆ ಅನುಗ್ರಹಿಸಬೇಕು ’ ’ ಎಂದು ಬೇಡಿಕೊಂಡರು . ಅದರಂತೆ ರುದ್ರರು ಅನುಗ್ರಹಿಸಲಾಗಿ ಪಾರ್ವತಾದೇವಿಯು ರುದ್ರನ್ನು ಕೈಲಾಸಕ್ಕೆ ಕರೆದುಕೊಂಡು ಬಂದು ಆ ರುದ್ರರು ಯಾವ ಯಾವ ದನುಜರಾಜರ ಶಿರವಿಡಿದು ಕೊಂದಿದ್ದರೋ ಅವರವರ ಹೆಸರುಗಳೇ ತತ್ಪುತ್ರರಿಗೆ ಗೋತ್ರಗಳಾದವೆಂದು ಹೇಳಿದ ರೀತಿಯಲ್ಲಿ ಪಟ್ಟಗಟ್ಟಿದಳು ಹೇಗೆಂದರೆ.

ಶ್ರೀ ನೀಲಕಂಠ ರುದ್ರನು ಶುಭ ವರ್ಣದ ವೃಷಭ ರೂಪದಿಂದ ಪರಘಾಸುರನೆಂಬ ದೈತ್ಯನನ್ನು ಸಂಹರಿಸಿದುದಕ್ಕಾಗಿ ಪರಮ ಗೋತ್ರವೆಂದು ನಾಮ ಉಂಟಾಯಿತು . ಅದಕ್ಕದೇ ಕುರುಹು . ಇದೇ ಪ್ರಕಾರ 66 ರುದ್ರರು ಭಿನ್ನ ಭಿನ್ನ ವರ್ಣದ ವೃಷಭ ರೂಪದಿಂದ 66 ದನುಜರಾಜರನ್ನು ಅವರ ಸೈನ್ಯಬಲದೊಂದಿಗೆ ಸಂಹರಿಸಿದ ಕುರಹಿಗಾಗಿ 66 ಗೊತ್ರಗಳ ನಾಮಗಳು ಕೆಳಗಿನಂತೆ ಉದಯಿಸಿದವು.

ಬ್ರಹ್ಮವರ್ಣದ ಹನ್ನೆರಡು ಗೋತ್ರಗಳು

ಅ.ನಂ. ಗೋತ್ರಗಳು ಸಂಬಂಧಿಸಿದ ರುದ್ರರು
1 * ಪರಮಗೋತ್ರ ಶ್ರೀ ನೀಲಕಂಠರುದ್ರ
2 ಹೊಂಗೋತ್ರ ಶ್ರೀ ಆದಿರುದ್ರ
3 * ಬನ್ನಿಗೋತ್ರ ಶ್ರೀ ಅನಾದಿರುದ್ರ
4 ಭಂಡಿಗೋತ್ರ ಶ್ರೀ ಅವ್ಯಕ್ತರುದ್ರ
5 * ಸರಗೋತ್ರ ಶ್ರೀ ಪ್ರಚಯರುದ್ರ
6 ಧರ್ಮಗೋತ್ರ ಶ್ರೀ ಅನಾಮಯರುದ್ರ
7 * ಸ್ವರಭಗೋತ್ರ ಶ್ರೀ ಅಭಗತರುದ್ರ
8 ಹೆಮ್ಮೆಗೋತ್ರ ಶ್ರೀ ಭರ್ಗೋದೇವರುದ್ರ
9 ಕಡಲಿಗೋತ್ರ ಶ್ರೀ ವಿಶಾಭದ್ರರುದ್ರ
10 ಮಣಸುಗೋತ್ರ ಶ್ರೀ ಹೇರಂಕರುದ್ರ
11 * ಬೆಣ್ಣೆಗೋತ್ರ ಶ್ರೀ ವಿರುಪಾಕ್ಷರುದ್ರ
12 ಹಲಗಿಗೋತ್ರ ಶ್ರೀ ಮಹಾಬಲೇಶ್ವರ

ಕ್ಷತ್ರಿಯ ವರ್ಣದ ಮೂತ್ತೊಂದು ಗೋತ್ರಗಳು

ಅ.ನಂ. ಗೋತ್ರಗಳು ಸಂಬಂಧಿಸಿದ ರುದ್ರರು
1 ಮುಳ್ಳುಗೋತ್ರ ಶ್ರೀ ರುದ್ರ
2 ಹಿಟ್ಟುಗೋತ್ರ ಶ್ರೀ ವೃಷಭಧ್ವಜರುದ್ರ
3 * ನುಚ್ಚುಗೋತ್ರ ಶ್ರೀ ಶಶಿಧರರುದ್ರ
4 ದೇವಗೋತ್ರ ಶ್ರೀ ಶೂಲಪಾಣಿರುದ್ರ
5 * ಹಾಲುಗೋತ್ರ ಶ್ರೀ ಕಾಮಸಂಹಾರರುದ್ರ
6 ಕಿಂಕಿಲಗೋತ್ರ ಶ್ರೀ ಶ್ರೀಕ೦ಠರುದ್ರ
7 * ಗೋರಿಗಿ ಗೋತ್ರ ಶ್ರೀ ಸಿತಿಕಂಠರುದ್ರ
8 ಸಲಗಿಗೋತ್ರ ಶ್ರೀ ಗ೦ಗಾಧರರುದ್ರ
9 * ಗೌಡಗೋತ್ರ ಶ್ರೀ ಕೋದಂಡರುದ್ರ
10 ಮಿಡಚಿ ಗೋತ್ರ ಶ್ರೀ ಪಿನಾಕಿರುದ್ರ
11 * ಮಿಣಿಗೋತ್ರ ಶ್ರೀ ಶಕ್ತಿ ಸಮೇತರುದ್ರ
12 ಬಸರಿಗೋತ್ರ ಶ್ರೀ ಪಶುಪತಿರುದ್ರ
13 * ಅರೆಗೋತ್ರ ಶ್ರೀ ಸ್ಥಾಣಿರುದ್ರ
14 ಇಂಗೋತ್ರ ಶ್ರೀ ಧೂರ್ಜಟಿರುದ್ರ
15 * ವಂಕಿಗೋತ್ರ ಶ್ರೀ ನೀಲಲೋಹಿತರುದ್ರ
16 * ಇಣಿಗೋತ್ರ ಶ್ರೀ ಷಡಂಗರುದ್ರ
17 * ಗದ್ದುಗಿಗೋತ್ರ ಶ್ರೀ ಪ೦ಚಾ೦ಗರುದ್ರ
18 ಜೀರಿಗಿಗೋತ್ರ ಶ್ರೀ ಸರ್ವಜ್ಞರುದ್ರ
19 * ಕಕ್ಕಿಗೋತ್ರ ಶ್ರೀ ಕೃಶಾನುರೇತ್ರರುದ್ರ
20 ಹೊಟ್ಟಿಗೋತ್ರ ಶ್ರೀ ಉಗ್ರಶೇನರುದ್ರ
21 * ಕೇಸರಿಗೋತ್ರ ಶ್ರೀ ತ್ರಿಪುರಾಂತಕರುದ್ರ
22 ಗು೦ಡುಗೋತ್ರ ಶ್ರೀ ತ್ರಿಗುಣಾತ್ಮರುದ್ರ
23 * ಕೆ೦ಜುಗೋತ್ರ ಶ್ರೀ ವಿಶ್ವಾತ್ಮಕರುದ್ರ
24 ಅಣಸುಗೋತ್ರ ಶ್ರೀ ವೇದಾತ್ಮಕರುದ್ರ
25 * ಜಾಲಿಗೋತ್ರ ಶ್ರೀ ಪಿ೦ಗಳಾಕ್ಷರುದ್ರ
26 ಕಟ್ಟಿಗೋತ್ರ ಶ್ರೀ ಪ೦ಚವಕ್ತರುದ್ರ
27 * ಕರೆಗೋತ್ರ ಶ್ರೀ ತ್ರಿಲೋಚನರುದ್ರ
28 ಹಗ್ಗೋತ್ರ ಶ್ರೀ ಆನಂತರುದ್ರ
29 * ರಕ್ಷಗೋತ್ರ ಶ್ರೀ ಸಹಸ್ರಾಕ್ಟರುದ್ರ
30 ಇಮೆಗೋತ್ರ ಶ್ರೀ ಸಹಸ್ರ ಶೀರ್ಷರುದ್ರ
31 * ಐರಾಣಿಗೋತ್ರ ಶ್ರೀ ಸಹಸ್ರ ಮುಖರುದ್ರ

ವೈಶ್ಯವರ್ಣದ ಇಪ್ಪತ್ತೂರು ಗೋತ್ರಗಳು

ಅ.ನಂ. ಗೋತ್ರಗಳು ಸಂಬಂಧಿಸಿದ ರುದ್ರರು
1 * ರಾಮಗೋತ್ರ ಶ್ರೀ ಲೋಕೇಶರುದ್ರ
2 ಇಣಿಚಿಗೋತ್ರ ಶ್ರೀ ಕ್ಷೇತ್ರಪಾಲರುದ್ರ
3 * ಸೂರ್ಯಗೋತ್ರ ಶ್ರೀ ಕಮಳಾಕ್ಷರುದ್ರ
4 ಅರಿಷಿಣಗೋತ್ರ ಶ್ರೀ ಜಗನ್ನಾಥರುದ್ರ
5 * ಟಿಕ್ಕಿಗೋತ್ರ ಶ್ರೀ ಜನಾರ್ಧನರುದ್ರ
6 ಸಂಸಾರಗೋತ್ರ ಶ್ರೀ ದೇವೋತ್ತಮರುದ್ರ
7 * ಸಂಪಿಗಿಗೋತ್ರ ಶ್ರೀ ಭೂತನಾಥರುದ್ರ
8 ಹೂಗೋತ್ರ ಶ್ರೀ ಪ್ರಳಯಕಾಲರುದ್ರ
9 * ಗುಳ್ಳುಗೋತ್ರ ಶ್ರೀ ಅಷ್ಟಾತ್ಮಕರುದ್ರ
10 ಕೆಂಗೋತ್ರ ಶ್ರೀ ಹುತಾಶನರುದ್ರ
11 ಗಾಡಿಗೆಗೋತ್ರ ಶ್ರೀ ಸಂಕರ್ಷಣರುದ್ರ
12 ಮುದ್ದುಗೋತ್ರ ಶ್ರೀ ವಾಗೀಶ್ವರರುದ್ರ
13 * ಗಿಕ್ಕಿಲಗೋತ್ರ ಶ್ರೀ ಭೂರುದ್ರ
14 ಹಂಚುಗೋತ್ರ ಶ್ರೀ ಕಾಲರುದ್ರ
15 * ಕುದರಿಗೋತ್ರ ಶ್ರೀ ವಾಮದೇವರುದ್ರ
16 ಸಿಂಧುಗೋತ್ರ ಶ್ರೀ ವೋಮಕೇಶರುದ್ರ
17 ಬಣಜುಗೋತ್ರ ಶ್ರೀ ಕೃತಿವಾಸರುದ್ರ
18 ಉತ್ತಮಗೋತ್ರ ಶ್ರೀ ಕಪರ್ದಿರುದ್ರ
19 * ನಾಗಗೋತ್ರ ಶ್ರೀ ಖಂಡಪರಶುರುದ್ರ
20 ಹೊಟ್ಟಿಗೋತ್ರ ಶ್ರೀ ಉಗ್ರಶೇನರುದ್ರ
21 * ಬಿಳಿಗೋತ್ರ ಶ್ರೀ ಮೃತ್ಯುಂಜಯರುದ್ರ
22 ಕಾಡುಗೋತ್ರ ಶ್ರೀ ಗಿರೀಶರುದ್ರ
23 * ಜುಂಜುಗೋತ್ರ ಶ್ರೀ ವಿಶ್ವನಾಥರುದ್ರ

ಸೂಚನೆ : * ಚಿನ್ನೆವುಳ್ಳ ಗೋತ್ರದ ಕೆಳಗಿನ ಗೋತ್ರವು ಮೇಲಿನ ಗೋತ್ರಕ್ಕೆ ಜವುಳ ಗೋತವೆನಿಸುವುದು.

ಇನ್ನು ತಾರಕಾಸುರನ ಪ್ರಾಣ ರಕ್ಷಣೆಗೈಯುತಲಿರುವ 11 ಜನ ದೈತ್ಯರನ್ನು ಶ್ರೀ ಷಣ್ಮುಖ ಸ್ವಾಮಿಯು ವರಾಹದಂತದಿಂದ ಸಂಹರಿಸಿದುದರಿಂದ ಆ ತಾರಕಾಸುರನ ಅಂತ್ಯವಾಯಿತು . ಅವರ ಕುರುಹಿಗಾಗಿ , ಮೇಲಿನಂತೆ ಕೆಳಗೆ ಕಾಣಿಸಿದ 11 ಗೋತ್ರಗಳು ಉದಯಿಸಿದವು.

ಶೂದ್ರ ವರ್ಣದ ಹನ್ನೊಂದು ಗೋತ್ರಗಳು :

ಅ.ನಂ. ಗೋತ್ರಗಳು
1 ತಮ್ಮ ಗೋತ್ರ
2 ಸರವಿಗೋತ್ರ
3 ರಿಕ್ಕಿಗೋತ್ರ
4 ಮರುಳಗೋತ್ರ
5 ಕೋಟಿಗೋತ್ರ
6 ಕಾಡಿಗಿಗೋತ್ರ
7 ಹುಲ್ಲುಗೋತ್ರ
8 ಮಲ್ಲಿಗಿಗೋತ್ರ
9 ಕುಂಟಗೋತ್ರ
10 ದುರ್ಗಗೋತ್ರ
11 ಕಣ್ಣಿಗೋತ್ರ

66 ಕೋಟಿ ದಾನವರನ್ನು ಸಂಹರಿಸಲು ಈ 66 ರುದ್ರರು ಹನ್ನೆರಡು , ಮೂತ್ತೊಂದು , ಇಪ್ಪತಮೂರರಂತೆ ಮೂರು ವಿಭಾಗಗಳನ್ನು ಮಾಡಿಕೊಂಡು ಹೋಗಿ ಯುದ್ಧಮಾಡಿ ಅವರನ್ನು ಸಂಹರಿಸಿದ್ದರಿಂದ ಅವರು ಅನುಕ್ರಮವಾಗಿ ಬ್ರಹ್ಮಕ್ಷತ್ರೀಯ ವೈಶ್ಯ ವರ್ಣದವರೆಂದು ಪರಿಗಣಿಸಲ್ಪಟ್ಟರು ಮತ್ತು ಸಮಸ್ತರುದ್ರರಿಗೆ ಹಾಗೂ ಅವರ ವಂಶಜರಿಗೆ , ಮೊದಲನೆಯ ವರ್ಗದ ದ್ವಾದಶ ರುದ್ರೇ ಸಮಾನ ಗೌರವದ ಗುರು ಗೋತ್ರದವರೆಂದು ಪರಿಗಣಿಸಲ್ಪಟ್ಟರು . ಈ 66 ಗೋತ್ರ - ಶೂತ್ರವುಳ್ಳ ಕುರುಹಿನಶೆಟ್ಟಿಗಳು ಶಂಕರನ ಇಪ್ಪತೈದು ಲೀಲೆಗಳನ್ನೊಳಗೊಂಡು ಇಪ್ಪತ್ತೆಂಟು ದಿವ್ಯಾಗಮನಗಳೊಳಗಿನ ಉತ್ತರವಾತುಲ ಶ್ರೀ ನೀಲಕಂಠ ಮಲ್ಲಿಕಾರ್ಜುನನೇ ಅವರ ಪ್ರಾಣಲಿಂಗ ಕುಲಸ್ವಾಮಿಯೆಂದು ಹೇಳಲ್ಪಟ್ಟಿತ್ತು . ಅವರ ತಾಯಿ ಪಾರ್ವತಿ ತಂದೆ ಪರವಮೇಶ್ವರ , ಅವರ ಬಂಧು - ಬಳಗ ಅಸಂಖ್ಯಾತ ಮಹಾ ಗಣಂಗಳು , ಅವರ ಮುದ್ರೆ ಬಿಳಿಯ ಎತ್ತು , ಬಿಳಿಯ ಗುಡಿ ನಾಗಚಕ್ರದ ಗಣಿ ನಂದಿಯ ಅಚೊತ್ತಿದ ಹೊನ್ನು ಗೊಣಿಸಿಲ್ಲದ ಹಸುಬೆ , ಅಣಸಿಲ್ಲದ ಚಿನ್ನದ ಕೋಲು ನಂದಿಯ ಪಟ , ಗಗನ ಗಂಗೆಯೇ ಜಲಪಾತ್ರೆ , ಮೇಷಗಂಗೆಯ ಭಾವಿ , ಧ್ರುವಮಂಡಲವೇ ಶಿಖರ , ಪಂಚಾಕಾಶವೇ ಮನೆ , ನಕ್ಷತ್ರ ಮಾಲೆಯೇ ಆಭರಣ , ಬ್ರಹ್ಮಾಂಡ ಮುಕುಟ ಅಜಾಂಡವೇ ಕಾಯು ಭೂಮಿಯೇ ಪಾದ ಮುಖವೇ ವೇದ , ಚರಣತೀರ್ಥ ಮಸ್ತಕಕ್ಕೆ ಲಿಂಗಧಾರಣ , ಶಿಖಾಸೂತ್ರ , ಜಟಾಭಸ್ಮ ನಿಗಮ ಬಂದ , ಗಾಯರ್ತಿ ಮೌಜನ ಹೇಮಾದ್ರಿ ಮೇಖಲಾ ಮೇರುದಂಡ .

ಅವರ ಕ್ರಿಯೆ - ವೀರಶೈವಾಚಾರ ಅವರ ಆಚಾರವೇ ವೀರಮಾಹೇಶ್ವರ ಆಚಾರ ಸಂಗ್ರಹ ಅವರ ಜಾತಿ ಧರ್ಮಾಚಾರ , ಮಾರ್ಗ ಪ್ರತಿಷ್ಠಾಚಾರ್ಯ ಪಂಚಾಚಾರ ಕುಲಾಶ್ರಮ , ಶಿವಪದ ದ್ರೋಹಿಗಳಿಗೆ ಗಂಡ ಭೇರುಂಡ ನುಡಿಯೇ ಶಿವಧರ್ಮ , ನುಡಿಯೇ ಶಿವತತ್ವ ಧರ್ಮ ನೇತ್ರವೇ ಶಿವಜ್ಞಾನ ಧರ್ಮ ಸೂತ್ರವೇ ಶಿವಪುರಾಣ ಧರ್ಮ , ಹಸ್ತವೇ ಅಹಿಂಸೋಪರಮೋಧರ್ಮ , ಹೃದಯವೇ ಶಿವತತ್ವಜ್ಞಾನ ಧರ್ಮ ಸರ್ವಾಂಗಲಿಂಗ ಮುದ್ರಾಂಕಿತ ಧರ್ಮ .

ಉತ್ತರವಾತುಲಾಗಮದ ಭವಿಷ್ಯತ್ತರ ಪುರಾಣದಲ್ಲಿ ಶ್ರೀ ನೀಲಕಂಠರುದ್ರನೆ ರುದ್ರವಂಶ ಕುರುಹಿನಶೆಟ್ಟಿ ಧರ್ಮದವರಿಗೆ ಧರ್ಮದೇವತೆಯಾಗಿಹನು ಸಕಲ ರುದ್ರರಿಗೆ ಗುರುವಾಗಿರುವದರಿಂದ ಗುರುವಿನ ಗುರು ಪರಮಗುರುವೆನಿಸಿಹನು.

ಧರ್ಮ ನೀತಿಗನುಸಾರವಾಗಿ ರುದ್ರವಂಶರಾದ ನಾವೆಲ್ಲರೂ ಶ್ರೀ ನೀಲಕಂಠರುದ್ರನ ವಿಷಯದಲ್ಲಿ ನಯವಿನಯ ಭಯಭಕ್ತಿಗಳಿಂದ ನಡೆದುಕೊಳ್ಳಬೇಕು .

  1. ಬಸವನ ಅ೦ಡವನಳಿಯಬಾರದು.
  2. ಸೋಮವಾರ - ಗುರುವಾರ ಬಸವನ ( ಎತ್ತಿನ ) ಕೊರಳಿ ಕಟ್ಟಬಾರದು.
  3. ತಕ್ಕಡಿಯ ಪರಡಿಗಳಿಗೆ ನಾಲ್ಕು ದಾರಗಳನ್ನು ಉಪಯೋಗಿಸಬೇಕು.
  4. ವಿವಾಹದಲ್ಲಿ ರುದ್ರವಿಳ್ಳೆ ವಿತರಣ ಮಾಡುವಾಗ 66 ರುದ್ರರ ಕುರುಹಿಗಾಗಿ 66 ಅಡಿಕಿ 101 ಎಲೆಗಳನ್ನು ಸ್ವರಭಗೋತ್ರದವರೇ ಹಂಚಬೇಕು
  5. ಓಂಕಾರ ಪ್ರಣವ ಸ್ವರೂಪದಲ್ಲಿ ಜನಿಸಿರುವದರಿಂದ ರುದ್ರರು ತಮ್ಮ ತಮ್ಮೊಳಗೆ ಜವುಳಗೋತ್ರ ಬಿಟ್ಟು ವಿವಾಹ ಜರುಗಿಸಬೇಕು.
  6. ಕನ್ಯಾದಾನ ಮಾಡಿಕೊಡಬೇಕು.
  7. ಸ್ವಧರ್ಮ ಪ್ರೇಮದ ಭರದಲ್ಲಿ ಪರಧರ್ಮವನ್ನು ದೂಷಿಸದೆ ಪರಧರ್ಮ ಸಹಿಷ್ಣುತೆಯುಳ್ಳವನಾಗಿರಬೇಕು. ಕುರುಹಿನಶೆಟ್ಟಿ ಧರ್ಮದವರೆಲ್ಲರೂ ರುದ್ರರೇ ಇರುತ್ತಾರೆಂಬುದನ್ನರಿತುಕೊಂಡು ಮೇಲೆ ಬರೆದ ತಿ ನಿಯಮಗಳನ್ನು ಪಾಲಿಸುವುದರಲ್ಲಿ ಹಿಂಜರಿಯದಿರುವದೊಳ್ಳೆಯದು.

ಶ್ರೀ ಕುರುಹಿನಶೆಟ್ಟಿ ಸಮಾಜದ ಸಂಬಂಧಪಟ್ಟ ಗೋತ್ರಗಳು ಹಾಗೂ ಆಯಾ ಗೋತ್ರಗಳಿಗೆ ಸಂಬಂಧಪಟ್ಟ ಮನೆಗಳು

ಈ ಕೆಳಗೆ ಪ್ರಕಟಿಸಿದ ಗೋತ್ರಗಳ ವಿವರಗಳನ್ನು ಆದವಾನಿಯರು ಪ್ರಕಟಿಸಿದ ಪುಸ್ತಕದ ಆಧಾರದ ಮೆಲೆ ಮುದ್ರಿಸಿರುತ್ತದೆ ಹಾಗೂ ನಮಗೆ ಶಕ್ಯದ ಮಟ್ಟಿಗೆ ಉಪನಾಮಗಳು ಸೇರಿಸಲಾಗಿದೆ.

  1. ಧರ್ಮಗೋತ್ರಕ್ಕೆ : ಗಡಗೆಯವರು , ಮಿಟ್ಟಿನವರು ಉಪನಾಮಗಳು : ಅರಣಿಯವರು ( 2 ಮನೆ 2 ಎಳ್ಳೆ ).
  2. ಸಲಗಿಗೋತ್ರಕ್ಕೆ : ಶ್ಯಾವೇನವರು , ಸಂಗಾನವರು , ಛಾಯನವರು , ಬೂದೂರವರು , ಬಂದಿಕೆನವರು , ತೌಡಾನವರು ( 6 ಮನೆ 6 ವಿಳ್ಳೆ ).
  3. ಮೆಸುಗೋತ್ರ : ಗೋಟೂರವರು , ಕರೆನವರು , ಕಾಕೆನವರು , ರಬ್ಬಾನವರು , ಮೈಲೆನವರು , ಮಸಕೆನವರು , ಶರುವನರು , ಮೂವಾನವರು , ದೊಡ್ಡನವರು , ಭುತಗೊಂಡನವರು , ಮಾಂತಾನವರು , ಅಲಕಟ್ಟಿನವರು , ಕಸಾನವರು ಗೋನೂರವರು , ಅಬ್ದತ್ತೆನವರು , ಕುಣಿನವರು , ಕಸಾನವರು , ಗುಗ್ಗರಿಯವರು , ಧೂಳನವರು , ( 19 ಮನೆ 19 ವಿಳ್ಯ ). ಉಪನಾಮಗಳು : ಗಡ್ಡದವರು , ಕರಾಪದಿನ್ನಿಯವರು , ಗಚ್ಚಿನಮನಿಯವರು . ಅಗಡಿಯವರು , ಮನ್ನಾಪುರ , ಬೆನಾಳ.
  4. ಕಟ್ಟಿಗೋತ್ರಕ್ಕೆ : ( ಕೋಟಿ ) ಮಾಚಾನವರು , ಮಾದಗೊಂಡವನರು , ಚಿದಿಗೇನವರು , ಸಾಲ್ಮನಿ , ಬೌಗಾನವರು , ಗುಮ್ಮೆನವರು , ಕೊಚನವರು , ಅಡಕೆನವರು , ಗಂಗಾನವರು , ಜಕ್ಕುಂಡಿಯವರು , ದೇವಾನವರು , ಕೂಮರಪ್ಪನವರು , ಚಿಲ್ಲಡೆಯವರು , ಕೊಳ್ಳಿನವರು , ಗಿಟಿಕೆನವರು , ಬಟಕೇರಿಯವರು , ವಿಭೂತಿಯವರು , ಇರಮಾಲವರು , ಸಿದನೂರವರು , ಬಂದಾನವರು , ಕೂರ್ಕೆಯವರು , ಉಡಗೋಲವರು , ಜಿರಾಳ ( ಜೀರಂಗಿ ) , ಕೋಟಿ ( 21 ಮನೆ 21 ವಿಳ್ಯ ) - ಉಪನಾಮಗಳು : ದೆಸಾಯಿಯವರು , ಕಾಗಿಯವರು , ಬಗನಾಳವರು ಬಿದರೂರವರು.
  5. ಹೊಂಗೋತ್ರಕ್ಕೆ : ಕೆಂಚಗೊಂಡನವರು , ( 1 ಮನೆ 1 ವಿಳ್ಯ )
  6. ಹೆಮ್ಮಿಗೋತ್ರಕ್ಕೆ : ಗಣಪಾನವರು , ( 1 ಮನೆ 1 ವಿಳ್ಳೆ ).
  7. ಗೌಡಗೋತ್ರಕ್ಕೆ : ಐಲೆನವರು , ( 1 ಮನೆ 1 ವಿಳ್ಳೆ ).
  8. ಮಿಣಿಗೋತ್ರಕ್ಕೆ : ಗಂಗುಂಡನವರು , ಗೋಡಾನವರು , ಆವಾಲನವರು , ಮಂಚಾಲವರು ಕಾಮಾರ್ತಿಯವರು , ಭಂಡಾನವರು , ಅಗ್ಗನೂರವರು , ಜಯಾನವರು , ನಾಗಳ್ಳನವರು ( 9 ಮನೆ 9 ವಿಳ್ಳೆ ). ಉಪನಾಮಗಳು : ಆಮ್ರದವರು .
  9. ಬಸರಿಗೋತ್ರಕ್ಕೆ : ಟಂಕಸಾಲಿಯವರು , ಪಸಲಾದಿಯವರು ( 2 ಮನೆ 2 ವಿಳ್ಳೆ ).
  10. ಅರೆಗೋತ್ರಕ್ಕೆ : ತಟ್ಟಿನವರು ( 1 ಮನೆ 1 ವಿಳ್ಳೆ ).
  11. ವಂಕಿಗೋತ್ರಕ್ಕೆ : ಆರ್ಕಾನವರು , ಅರ್ನೆನವರು , ಚೂಡಾನವರು , ಗಾಸಾನವರು , ಎನಗೊಂಡನವರು , ( 5 ಮನೆ 5 ವಿಳ್ಯ ).
  12. ಕಕ್ಕಿಗೋತ್ರಕ್ಕೆ : ಮಿಟಿಕೇರಿಯವರು , ( 1 ಮನೆ 1 ವಿದ್ಯೆ ).
  13. ಕೆಂಜುಗೋತ್ರಕ್ಕೆ : ಚಿಟಿಬತ್ತಿಯವರು , ( 1 ಮನೆ 1 ವಿಳ್ಳೆ ).
  14. ಕೆರೆಗೋತ್ರಕ್ಕೆ : ಪಾಸಗುಂಡಿಯವರು , ಧೂಪದವರು , ತಾಳಾನವರು , ಮಾಳಾನವರು , ಚಿ ೦ ಡಗುಂಡನವರು , ( 5 ಮನೆ 5 ವಿಳ್ಳೆ ).
  15. ರಕ್ಷಗೋತ್ರಕ್ಕೆ : ಮೊಸೆನವರು , ( 1 ಮನೆ 1 ವಿಳ್ಳೆ )
  16. ರಾಮಗೋತ್ರ : ಬುಗಡೆನವರು , ( 1 ಮನೆ 1 ವಿಳ್ಳೆ )
  17. ಆರ್ಯಗೋತ್ರಕ್ಕೆ : ಮಾಂತಗೊಂಡನವರು , ರೊಡ್ಡಾನವರು , ವಾಲವರು , ಬನ್ನಾಲವರು , ಸರ್ಲಾನವರು , ( 5 ಮನೆ 5 ವಿಳ್ಳೆ ). ಉಪನಾಮಗಳು : ಹಿಂಡಿಯವರು .
  18. ಸಂಸಾರಗೋತ್ರಕ್ಕೆ : ಸಡ್ಡೆನವರು , ಅಪ್ಪಾನವರು , ಗಂಜೆನವರು , ಛಂಡಾನವರು , ಮಾಡನವರು , ( 5 ಮನೆ 5 ವಿಳ್ಳೆ ).
  19. ಬಣಜುಗೋತ್ರಕ್ಕೆ : ಮಾಚರ್ಲನವರು , ( 1 ಮನೆ 1 ವಿಳ್ಳೆ )
  20. ಬಿಳಿಗೋತ್ರಕ್ಕೆ : ಕನಕೆಯವರು , ಕೂನಾನವರು , ಕೊಟೆಗೆಯವರು , ಚುಡುಗುಂಡನವರು , ಕುಣಿಗೇರಿಯವರು ( 5 ಮನೆ 5 ವಿಳ್ಳೆ ).
  21. ಕಾಡುಗೋತ್ರಕ್ಕೆ : ಬುಟ್ಟಾನವರು , ( 1 ಮನೆ 1 ವಿಳ್ಳೆ ). (ಈ ನಾಮಗಳು ಮೈಸೂರು ದೇಶದ ಅಲಿಂಗಿಗಳಿಗೆ ಸಂಬಂಧವಿಲ್ಲಾ).

ಇವುಗಳನ್ನು ಬಹಳ ವಿಚಾರದಿಂದ ಪರಿಶೋಧಿಸಿ ಬರೆಯಲ್ಪಟ್ಟಿರುತ್ತದೆ . ನ್ಯೂನಾಧಿಕ್ಯವಿದ್ದಲ್ಲಿ ಪ್ರಾಜ್ಞರು ಈ ವಿಳಾಸಕ್ಕೆ ತಿಳಿಸಿದರೆ ಮುಂದಿನಾವೃತ್ತಿಯಲ್ಲಿ ಸುಧಾರಿಸುತ್ತೇವೆ.

ಶ್ರೀ ಕುರುಹಿನ ಶ್ರೇಷ್ಠಿಗಳ ಮನೆಗಳು

  1. ಹೊಂಗೋತ್ರ : ಕೆಂಚಗೊಂಡ
  2. ಧರ್ಮಗೋತ್ರ : ಗಡಿಗೆ ; ಮಿಟ್ಟೆ
  3. ಹೆಮ್ಮೆಗೋತ್ರ : ಗಣಪಾ
  4. ಗೌಡಗೋತ್ರ : ಐಲಿ
  5. ಮೆಣಸುಗೋತ್ರ : ಕರೆ , ಕಾಗೆ , ಮೈಲೆ , ಮಶಿಕೆ , ಶಿರು , ಮುವಾ , ದೊಡ್ಡ , ಭೂತು , ಗೊಂಡ , ಮಾಂತಾ , ಅಲಕಟ್ಟೆ , ಕಾಸಾ , ಗೋಟೂರ , ಗೋನುರ , ಅಬ್ದತ್ತೆ , ರಬ್ಬಾ , ಕೊಕರ , ಗುಗ್ಗರಿ , ಕುಣಿ , ಧೂಳಾ , ಗಾಳಿ , ಅರಕೇರಿ , ಕಿನ್ನಾಳ , ನರಗುಂದ , ಗುಂಜನಹಳ್ಳಿ.
  6. ಸಲಗಿಗೋತ್ರ : ಸಂಗಾ , ಛಾಯಾ , ಬೂದೂರ , ಬಂದಿಗೆ , ಶ್ಯಾವೆ , ತೌಡಾ , ಪುರದ , ಭಾವಿಕಟ್ಟಿ ಗುಡಿ.
  7. ಮಿಣಿಗೋತ್ರ : ಗುಂಗುಡ , ಗೋಡಾ , ಆವಾಲ , ಮಂಚಾಲ , ಕಾಮಾರ್ತಿ , ಭಂಡಾ , ಅಗ್ಗನೂರ , ಜಯಾ , ನಾಗೆಳ್ಳ , ಆಮ್ರದ , ತಿಪ್ಪಾಪೂರ.
  8. ಬಸರಿಗೋತ್ರ : ಟಂಕಸಾಲಿ , ಫಸಲಾದಿ , ತೂರ್ಪು , ಚಿಕನಿ , ಉಂಕಿ
  9. ಅರೆಗೋತ್ರ : ತಟ್ಟಿ
  10. ಬಣಜುಗೋತ್ರ : ಮಾಚರ್ಲ
  11. ವಂಕಿಗೋತ್ರ : ಅರ್ಕಾ , ಅರ್ನೆ , ಚೂಡಾ , ಗಾಸಾ , ಎನಗೊಂಡ , ಅರಕಾಲ , ಹೊಟ್ಟೆ.
  12. ಕಕ್ಕಿಗೋತ್ರ : ಮಿಟಕೇರಿ , ದಂಡೆಗಾಳ , ಗುಂಡ್ಲಾ , ಸಟ್ಟೆಗಾಳ.
  13. ಕೆಂಚುಗೋತ್ರ : ಚಿಟಬತ್ತಿ , ಮೂಂಲಿಟಿ , ದಂಡೆಗಾಳ , ಗುಂಡಾ ಮಾಚಾ , ಚಿದಗೆನ.
  14. ಕೋಟಿಗೋತ್ರ ( ಕಟ್ಟಿಗೋತ್ರ ) : ಮಾದಗೊಂಡ , ಚೌಗಾ , ಗುಮ್ಮೆನ , ಕೂಚು , ಅಡಕೆ , ಗಂಗಾ , ಜಕ್ಕುಂಡಿ , ದೇವಾ , ಕೊಮರಪ್ಪ , ಸಾಲ್ಮನಿ , ಇರಮಾಲ , ಸಿದನೂರ , ಬಂದಾ , ಕೊರ್ಕೆ , ಉಡಗೋಲ , ವಾಲ , ಅಛಗಟ್ಟಾ , ಪಕ್ಷನಾಳ , ಕವಲೂರ , ಬಣ್ಣದಬಾವಿ , ಮ್ಯಾಗಳಮನಿ , ಹರಪನಹಳ್ಳಿ , ದ್ಯಾಮಣ್ಣನವರ.
  15. ಕರೆಗೋತ್ರ : ಪಾಸಗುಂಡಿ , ಧೂಪ , ತಾಳಾ , ಮ್ಯಾಳಾ , ಚಿದಗುಂಡ , ಪೋಚಗುಂಡಿ , ಹೇರೂರ.
  16. ರಕ್ಷಗೋತ್ರ : ಮೋಸೆ , ಮೋನೆ .
  17. ರಾಮಗೋತ್ರ : ಬುಗಡೆ
  18. ಆರ್ಯಗೋತ್ರ : ಮಾಂತಗೊಂಡ , ರೊಡ್ಯಾ ಮಾಲ , ಬಾಲ , ಸರ್ಲಾ
  19. ಸಂಸಾರಗೋತ್ರ : ಸಡ , ಅಪ್ಪಾ , ಗಂಜಿ , ಭಂಡಾ , ಮಾಡ, ವೀರಾಪೂರ , ಜಡಿ .
  20. ಬಿಳಿಗೋತ್ರ : ಕನಕ , ಕೋನಾ , ಕೊಟ್ಟಿಗೆ , ಸ ೦ ಗು ೦ ಡ , ಕುಣಗರಿ , ಬಾಗೂರ , ಕುದರಿ.
  21. ಕಾಡುಗೋತ್ರ : ಬುಟ್ಟಾ
  22. ಮುಳ್ಳುಗೋತ್ರ : ಪೋಗುಲ